March 20, 2008

** ಅದೋ ಕನ್ನಡ ಕೂಗಿದೆ **

ಅಡಿಗಡಿಗೆ ಕನ್ನಡ ಕನ್ನಡ ಅಂತ
ಬರಿ ಬಣಗುಟ್ಟಿದರೆ ಒಣಜಂಬವಾದಿತೋ
ಮಾತುಮಾತಲಿ ಇರಬೇಕು ಸವಿಕನ್ನಡ
ನಡೆನುಡಿಯಲಿ ತೋರಬೇಕು ಸಿರಿಕನ್ನಡ

ಸಿರಿಕನ್ನಡದ ಅಂತ ಹಿರಿಯ ಮಾತನಾಡಿ
ಅಕ್ಕಪಕ್ಕದವರನು ಮೂದಲಿಸಿ ಸಿಡುಕಾಡಿ
ತೆಲುಗು ತಮಿಳು ಮರಾಠಿಗರಿಗೆ ಬೇಡವಾಗಿ
ಇಂಗ್ಲೀಷ್ ಗಂಟಿಕೊಂಡರೆ ಮಿಂಡರಾಗಿಬಿಡುವೆವೋ

ಇಂಗ್ಲೀಷ್ ಅಂತರಾಷ್ಟ್ರಿಯ ಬರಿ ಭ್ರಮೆನೀರಸ
ಉದಾರಿಕರಣ ವೈಶವೀಕರಣ ಬರಿ ವ್ಯಾಪಾರಿಕರಣ
ಬಡಿವಾರದಿಂದ ಕೊಚ್ಚುವ ವೈಶವಿಕರಣ ಹುಸಿನಾಟಕ
ವಿಧವಿಧ ವೈವಿದ್ಯ ಸೃಷ್ಠಿಯ ಮೂಲಮಂತ್ರ

ಕನ್ನಡದ ಕೊರಳ ಕಟ್ಟಿದೆ ಇಂಗ್ಲೀಷಿನ ಉರುಳಲ್ಲಿ
ನಾರುತ್ತಿದೆ ನಾಡು ಪಾಶ್ಛತ್ಯರ ಸೆರೆ ಸೆರಗಿನಲಿ
ಬೆತ್ತಲಾಗಿ ಬಿಕ್ಕುತ್ತಿದೆ ನಮಗಂಟಿದ ಗುಲಾಮಿಯಲಿ
ಹಂಗುತೊರೆದು ನಮ್ಮ ಸಿರಿಸಂಸ್ಕೃತಿ ಉಳಿಬೇಕಿಂದು

ಅವಹೆಚ್ಚಲ್ಲ ನಾವು ಕಡಿಮೆಯಲ್ಲ ಅವರಿಗವರದೆಚ್ಚು
ಇರಲಿ ಅವರಿವರ ನಡೆನುಡಿಯಲ್ಲಿ ಸಾಮರಸ
ಕಿಚ್ಚಿರಲಿ ನನ್ನದೆಂಬ ಅಭಿಮಾನ ಸ್ವಾಭಿಮಾನ
ತನ್ನತನತೋರೋಣ ದಿಟ್ಟತನದಿ ಬಿಟ್ಟು ಒಣಜಂಬ

ಮರೆತು ನಮ್ಮೂರ ಹಿರಿಸಿರಿ ಸಂಸ್ಕೃತಿ
ಬೆನ್ನೂರ ಅಬ್ಬರ ಬರಿಸಿ ತನ್ನೊಳು ವರಿಸಿ
ಅಧುನಿಕ ಬಡಿವಾರಿ ನಾವಾಗಿ ತೋರಿದರೆ
'ಸಿರಿಗನ್ನಡಂ ಗೇಲ್ಗೆ' ಅಲ್ಲ 'ಗಲ್ಲಾ'ಗುವುದೋ

ಉಡುಗೆ ತೊಡಿಗೆಯಲಿರಲಿ ಕನ್ನಡದ ಹೊಳಪು
ಕೂಳು ಕಾಳಿನಲಿರಲಿ ಕನ್ನಡದ ಕಂಪು
ನುಡಿವ ಮಾತಿನಲಿರಲಿ ಕನ್ನಡದ ಇಂಪು
ಆಗ ಬೆಳೆವುದು ನೋಡು ಕನ್ನಡದ ಸೊಂಪು


** ಕುಕೂ..

1 comment:

MD said...

ವಾಹ್
ಸೂಪರ್. ಕನ್ನಡದ ಬಗ್ಗೆ ನಿಮ್ಮ ಅಭಿಮಾನ ಕಂಡು ಸಂತೋಷವಾಯಿತು.
ಅಷ್ಟೇ ಅಲ್ಲ, ಕನ್ನಡ ಎಲ್ಲೆಲ್ಲಿ ಯಾವ್ಯಾವ ರೀತಿಯಲ್ಲಿ ಹಂಚಿ ಹೋಗುತ್ತಿದೆ ಅನ್ನೋದು ಸರಿಯಾಗಿಯೇ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದೀರಾ.

ಎಲ್ಲಿದ್ರಿ ಇಷ್ಟು ದಿನಾ ಸ್ವಾಮಿಗಳೇ?
ನಿಮ್ಮ ಗದ್ಯ ಮತ್ತು ಪದ್ಯ ಎರಡೂ ಸುಂದರವಾಗಿವೆ.
ಎಲ್ಲ ಬೇರೆ ಬೇರೆಯ ವರ್ಗಗಳಿಗೂ ತಲುಪಿದ ನಿಮ್ಮ(ಕವಿಯ) ಕಲ್ಪನೆ ಜಗತ್ತು ವಿಶಾಲವಾಗಿದೆ ಎಂಬುದು ಮಾತ್ರ ನಿಜ.