May 16, 2008

ನನ್ನ ಮುದ್ದು ಚಂದಿರ

ರಾತ್ರಿ ಹೊತ್ತಾಗೆ ಅಂಗಳದ ಬಯಲಾಗೆ
ಅವ್ವನ ಬಗಲಲ್ಲಿ ಎದೆಹಾಲು ಕುಡಿಯುತ್ತ
ಈ ಲೋಕ ಮರೆತು ನಾ ಮೇಲೆ ನೋಡಲು
ತೇಲೋ ಮೋಡದ ಮರೆಯಲ್ಲಿ ಇಣುಕಿ
ಬಾ ಎಂದು ನನ್ನ ಕರೆದಿದ್ದವನೇ
ನಿನ್ನ ಈ ಮೂದೇವಿ ಬಿಂದಿಗೆ ಚಂದಿರ

ಹಳ್ಳಾದ ದಂಡ್ಯಾಗೆ ಮಳ್ಳ ನಾ ಕುಳಿತಾಗ
ಬೆಳ್ಳಗೆ ಹೊಳೆಯುತ್ತ ಬಿಂಬದಾಗೆ ಕಾಣುತಿದ್ದ,
ನನ್ನೂರಿಂದ ನಿನ್ನೂರಿಗೆ ರಾತ್ರಿ ಹೊತ್ತಲ್ಲಿ
ನಾ ನಡೆದೋಗುವಾಗ ಬಿಡದೆ ಜೊತೆಯಲಿ ಬರುತ್ತಿದ್ದ
ನಿನ್ನ ಎದೆ ಉರಿಯ ಕಾರಣ ನನ್ನ ಬಿಂಬ ಚಂದಿರ

ನನ್ನೀ ಯೌವನದ ಮಾಯಾವಿ ಯಾತನೆಯಲ್ಲಿ
ಮೈಮರೆತು ಕನಸು ನೂರು ಕಾಣುವಾಗ
ಕಾಣದ ಒಲವಿನ ಗೆಳತಿಯ(ನಿನ್ನ) ನವುರು ರೂಪವನು
ತನ್ನ ಮೊಗದಲ್ಲೇ ತಂಪುಕಿರಣ ಬಾಣದಿಂದ ತೂರುತ್ತಾನೆ
ವೈಯಾರಿ ನಿನ್ನ ಸಿಡುಕಿನ ಕಾರಣ ನನ್ನ ಮುದ್ದು ಚಂದಿರ

ಬೇಡೆವೆಂದರು ನನ್ನ ಎದೆಯಲ್ಲಿ ಮೂಡಿ
ನನ್ನ ಹರಕು ಕವಿತೆಯ ಸಾಲಲ್ಲಿ ಬಂದು
ಬೆಳೆಕಿನ ಗೆರೆ ಎಳೆದು ನಗುತಾನೆ
ಎಲ್ಲೆಲ್ಲೋ ಅವನೇ ಮೂಡಿ ನಿನ್ನ ಕಾಣಿಸುತ್ತಾನೆ
ನೀನು ಮೂದಲಿಸುವ ನನ್ನ ಈ ತಂಪು ಚಂದಿರ

ನನ್ನ ಕವಿತೆಯ ಭಾವರೂಪವಾಗಿ
ಒಲವಿನ ಗೆಳತಿಯ ನೆನಪಿಗೆ ಬೆಳಕಾಗಿ
ನೊಂದ ಮನಸ್ಸಿಗೆ ಸಾಂತ್ವಾನ ಹೇಳಿ
ಒಂಟಿ ಮನಸ್ಸಿಗೆ ನಂಟಿನ ಗೆಳೆಯನಾಗಿ
ಎಲ್ಲೆಲ್ಲೋ ಯಾವಾಗಲೋ ಸದ್ದಿಲ್ಲದೆ
ಬಂದಿರುತ್ತಾನೆನನ್ನ ಕವಿತೆಯಲಿ ನಿನ್ನ
ವಕ್ರದ ಕಾರಣ ನನ್ನ ಭಾವ ಚಂದಿರ

** ಕುಕೂ..

2 comments:

jomon varghese said...

ನಮಸ್ಕಾರ,

ಚೆಂದದ ಕವಿತೆ. ಗುಬ್ಬಚ್ಚಿ-ಗೂಡಿನಂತೆ ಬೆಚ್ಚನೆಯ ಭಾವ. ಬರೆಯುತ್ತಲಿರಿ...

ಧನ್ಯವಾದಗಳು.
ಜೋಮನ್.

ತೇಜಸ್ವಿನಿ ಹೆಗಡೆ said...

ಕವನ ಚಂದಿರನಷ್ಟೇ ಮುದ್ದಾಗಿದೆ. ಬಾಳದಾರಿಯಲ್ಲೂ ನಡೆದು ಬಂದೆ. ಭಾವಪೂರ್ಣ ಬರಹಗಳನ್ನು ಕಂಡೆ. ಬರೆಯುತ್ತಿರಿ.