June 25, 2008

ಚಿನ್ನ ಚಿನ್ನ ಹನಿ-01

** ನೆನಪು **

ನಿನ್ನ ಮರೆಯಲು
ಹೊರಟೆನ್ನ
ಮನದ ಕಲ್ಪನೆಯಲ್ಲಿ
ಎಲ್ಲೆಲ್ಲೂ ಮೇಳೈಸಿ
ಮೆರೆದಾಡುತ
ನಡೆಯುವ
ನಿನ್ನ ನೆಪುಗಳ
ಸಾಲು ಸಾಲು
ಜಾತ್ರೆ.


** ಮರೆವು **

ಮರೆತು ಬಿಡು
ಮನವೆ
ಮರೆತು ಬಿಡು
ಅವಳ ಸಿಹಿ ಕನಸಿನ
ಕಹಿ ನೆನಪನ್ನ
ಮರೆಯುತ್ತಲೇ
ಇರು ಪ್ರತಿದಿನ
ಪ್ರತಿಕ್ಷಣ !

** ಯಾತ್ರೆ **

ನಿನ್ನ ನೆನಪೇ
ನನ್ನ ಬದುಕಿನ
ಜಾತ್ರೆ
ಮರೆತರೆ
ನನ್ನ ಯಾತ್ರೆ


** ಮಾರ್ದನಿ **


ನನ್ನ ಮೌನ
ಮುಗಿಲಿನಲ್ಲಿ
ನಿನ್ನ
ಮಾತುಗಳದೇ
ಮಾರ್ದನಿ

5 comments:

ತೇಜಸ್ವಿನಿ ಹೆಗಡೆ said...

ಹನಿಗಳೆಲ್ಲಾ ಚೆನ್ನಾಗಿವೆ.. ಅದರಲ್ಲೂ ಕೊನೆಯ ಹನಿ ತುಂಬಾ ಸಿಹಿಯಾಗಿದೆ.

Unknown said...

chennagide... innu chennagi ninu bariballe anisuthe...

Anonymous said...

ಲೇ ಕುಮ್ಮಿ ನೀನು ಯಾವಾಗಲೇ ಕವಿ ಆಗಿದ್ದು. ತುಂಬಾ ಖುಷಿ ಆಯಿತು ನಿನ್ನ ಚಿನ್ನ ಚಿನ್ನ ಹನಿ ನೋಡಿ. ನನಗೆ ಅನ್ನಿಸುತ್ತೆ ಯಾರೋ ಚೆಲುವೆ ನಿನ್ನ ಮನದಲ್ಲಿದ್ದಾಳೆ. ಯಾವ ಹನಿಯಲ್ಲೂ ಅವಳದೇ ವಿಷಯ. ಯಾರಪ್ಪ ಆ ಚಲುವೆ? ಅದೃಷ್ಟವಂತೆ ಬಿಡು ಆ ಬೆಡಗಿ. ದೇವರು ಒಳ್ಳೆಯದನ್ನು ಮಾಡಲಿ ನಿನಗೆ.

Anil Dhole said...

It,s Very good..........

Anonymous said...

very nice poems