February 03, 2008

~ ಪ್ರೇರಕ~


ಇರುವನೊಬ್ಬ ನನ್ನೊಳಗೆ ಪ್ರೇರಕ
ಸದಾ ನನ್ನ ಪಾಲಿಸುವ ಪಾಲಕ
ಬಿದ್ದು ಹೋದರು ಎದ್ದುನಿಲ್ಲಿಸುವ
ಹಬ್ಬಿದ ಕತ್ತಲಲ್ಲೂ ದಾರಿ ತೋರುವ
ಅಗೋಚರವಾಗಿ ಅಡಗಿ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ಸ್ವಾಭಿಮಾನದ ಕಿಚ್ಚು ಹಚ್ಚಿ
ಬವಣೆ ಇದ್ದರು ದಿಟ್ಟತನವ ಹೊಮ್ಮಿಸಿ
ಬದುಕಿ ನಡೆಯುವ ದಾರಿ ತೋರಿಸಿ
ನನ್ನ ಸೂತ್ರದಾರಿಯು ತಾನೆ ಆದರು
ತೋರಿಸಿಕೊಳ್ಳದೆ ಅವಿತು ನನ್ನ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ನನಗಿಲ್ಲ ಭಯ ಇವನಿರುವತನಕ
ಯಾರ ಹಂಗಿಲ್ಲ ವಶವರ್ತಿ ನಾನಲ್ಲ
ಅಂಗ ಊನ ವಿಕಲಾಂಗನಾದರು
ಭಂಗವಿಲ್ಲ ಬದುಕಿಗೆ ಜಂಗಾಬಲವೆಲ್ಲ
ಮೆಟ್ಟುವೆ ಕಷ್ಟಗಳ ದಿಟ್ಟ ದೀರನಾಗಿ
ಮಾಡುವೆ ಕಾಯಕ ಜಟ್ಟಿಯ ಪಟುವಂತೆ
ಇದ್ದರೆ ಸಾಕು ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ದುಃಖ ಭಯ ದೀನ ಭಾವ ಅಳಿಸಿ
ದೂರ ದೂಡಿ ದುಮ್ಮಳ ಉಮ್ಮಳ
ಬೆಂಬಲವಿಟ್ಟು ಹಂಬಲಿಸುವ ನನಗೆ
ಬೆಂಬಿಡದೆ ಕಾಯುತ್ತ ಬಾಳ ದಾರಿ ತೋರುತ್ತ
ನಿರ್ಲಿಪ್ತನಿಗೆ ಚೇತನವ ತುಂಬುತ್ತ
ನಡೆಸುವ ನನ್ನನ್ನು ಅಗೋಚರ ಪ್ರೇರಕ
ಅವನೇ ನನ್ನ ಅಂತರಾತ್ಮ



*~ಕುಕೂ..

2 comments:

ನಾಕುತಂತಿ said...

ನನ್ನ ಆತ್ಮೀಯಾ ಗೆಳೆಯ್ ತುಂಬಾ.. ಖುಶಿ ಅಯ್ತು ನೀವು ಬ್ಲಾಗ್ ಲೋಕಕ್ಕೆ ಬಂದಿದ್ದು ಕಂಡು. ಇವತ್ತು ನಿಮ್ಮ ಬ್ಲಾಗ್ ಕಣ್ಣಿಗೆ ಬಿತ್ತು.

ಆದಾರೀನಿಯವಾಗಿದೆ, ಪಾಲಿಸುವಂತಿದೆ, ಆಲಿಸುವಂತಿದೆ
ನಿಮ್ಮ 'ಪ್ರೇರಕ'.
ಸಗುತಲಿರಲಿ ಹೀಗೆ ಪಯಣ ಮುಂದೆ ಮುಂದೆ
ಹೊತ್ತು ಬರಲಿ ಎಲ್ಲ ಸತ್ವ ಶಕ್ತಿಯ ಒಳಗಿನಿಂದ
ತರುತ ಹೊಸ ಭಾವವ ಅನುಭವವ
ಹೊರಗಿರುವ ಜೀವಕೂ, ಒಳಗಿರುವ ಆತ್ಮಕೂ.

ಚೆನ್ನಗಿದೆ ಗೆಳೆಯ ಹನಿ-ಹನಿ ಕೂಡಿದರೆ ಹಾಳ್ಳ. ತೆನೆ-ತೆನೆ ಕೂಡಿದರೆ ಬಳ್ಳ. ಒಗಾಟ್ಟಾಗಲಿ ಎಲ್ಲ ಶಕ್ತಿ ತರಲಿ ಬರುವ ದಿನದಿ ಗುರುವಿನ ಕನಸ ನೆನಸ ಮಾಡಲು.
-Revana Kadur

Pramod P T said...

ಅಧ್ಬುತವಾಗಿದೆ ಕವನ.
ಮನ ಮಿಡಿಯುವಂತಿದೆ ಚಿತ್ರ!!

ಚಿತ್ರ ನೋಡಿದ ಮೇಲೆ ಕವನ ಹೊಳೆಯಿತೋ ಅಥವಾ ಕವನಕ್ಕಾಗಿ ಚಿತ್ರವೋ?